ಡಿ . ವಿ . ಗುಂಡಪ್ಪ(ಡಿ ವಿ ಜಿ )


ಡಿ . ವಿ . ಗುಂಡಪ್ಪ (ಡಿ ವಿ ಜಿ )

ಜೀವನಚರಿತ್ರೆ ವೀಕ್ಷಿಸಿ

ಕನ್ನಡ ಸಾಹಿತಿ ಮತ್ತು ತತ್ವಜ್ಞಾನಿ

ಹುಟ್ಟಿದ ದಿನಾಂಕ : '೧೭.೦೩.೧೮೮೭'.
ಮರಣ ದಿನಾಂಕ : '೦೭.೧೦.೧೯೭೫'.
ಕೃತಿ: 'ಮಂಕುತಿಮ್ಮನ ಕಗ್ಗ'.

ಇತಿಹಾಸ

ಡಿ . ವಿ . ಗುಂಡಪ್ಪ
ದೇವನಹಳ್ಳಿ ವೆಂಕಟರಮಣಯ್ಯ ಗುಂಡಪ್ಪ, ಡಿ ವಿ ಜಿ ಎಂದು ಚಿರಪರಿಚಿತರು
‘ಮಂಕುತಿಮ್ಮನ ಕಗ್ಗ’ ದಂತಹ ಕೃತಿಯನ್ನು ರಚಿಸಿದ್ದಾರೆ .
ಹುಟ್ಟಿದ ದಿನಾಂಕ :
'೧೭.೦೩.೧೮೮೭', ಮುಳಬಾಗಿಲು, ಕೋಲಾರ ಜಿಲ್ಲೆ .
ಮರಣ ದಿನಾಂಕ :
'೦೭.೧೦.೧೯೭೫', ಬೆಂಗಳೂರು
ಜನಪ್ರಿಯ ಕೃತಿ
ಮಂಕುತಿಮ್ಮನ ಕಗ್ಗ
ಬೇರೆ ಕ್ಷೇತ್ರಗಳಲ್ಲಿ ಇವರು
ವೇದ, ವೇದಾಂತ , ಬ್ರಹ್ಮಸೂತ್ರ , ಧರ್ಮಸೂತ್ರ ಸಂಸ್ಕೃತ , ಕನ್ನಡ , ಕರ್ನಾಟಕದ ರಾಜಕೀಯ ಸ್ಥಿತಿ , ರಾಮಾಯಣ ಮತ್ತು ಮಹಾಭಾರತ .

ಪ್ರಶಸ್ತಿ ಮತ್ತು ಗೌರವ

1974 ರಲ್ಲಿ ಭಾರತ ಸರ್ಕಾರದಿಂದ ಪದ್ಮ ಭೂಷಣ ಪ್ರಶಸ್ತಿ 1974.

ಡಿ . ವಿ . ಗುಂಡಪ್ಪನವರಗಳು ಪುಸ್ತಕ:

ಕಾವ್ಯಗಳು
 • ಕವಿತೆ
 • ನಿವೇದನ
 • ಉಮರನ ಒಸಗೆ
 • ಮಂಕುತಿಮ್ಮನ ಕಗ್ಗ
 • ಮರುಳ ಮುನಿಯನ ಕಗ್ಗ
 • ಶ್ರೀರಾಮ ಪರೀಕ್ಷಣಂ
 • ಅಂತಃಪುರಗೀತೆ
 • ಅಂತಃಪುರಗೀತೆ
 • ಗೀತಾ ಶಕುಂತಲ
ನಾಟಕಗಳು
 • ವಿದ್ಯಾರಣ್ಯ ವಿಜಯ
 • ಜಾಕ್ ರೆಡ್
 • ಮ್ಯಾಕ್ ಬೆತ್
ಇತರೆ
 • ಪುರುಷಸೂಕ್ತ
 • ದೇವರು
 • ಋತು ಸತ್ಯ ಮತ್ತು ಧರ್ಮ
 • ಜೀವನ ಸೌಂದರ್ಯ ಮತ್ತು ಸಾಹಿತ್ಯ
Close

ಇತರೆ ಮಾಹಿತಿ

ಎಲ್.ಎಸ್.ಪಾಸಾದ ನಂತರ ಹೈಸ್ಕೂಲಿಗೆ ಸೇರಿದ್ದು ಮೈಸೂರಿನ ಮಹಾರಾಜ ಕಾಲೇಜಿಗೆ ಒಳಪಟ್ಟಿದ್ದ ಹೈಸ್ಕೂಲಲ್ಲಾದರೂ ಅಜ್ಜಿ ತಾತನ ಸಾವಿನಿಂದ ಊರಿಗೆ ಬಂದವರು ಪುನಃ ಮೈಸೂರಿಗೆ ಹೋಗಲಿಲ್ಲ. ನಂತರ ಸೇರಿದ್ದು ಕೋಲಾರದ ಹೈಸ್ಕೂಲಿಗೆ. ಚರಿತ್ರೆಪಾಠ ಮಾಡುವ ಕೃಷ್ಣಸ್ವಾಮಿ ಅಯ್ಯರ್‌ರವರು ಲಾರ್ಡ್‌‌ಮಾರ್ಲೆ ಎಂಬಾತ ಬರೆದಿರುವ ಗ್ಲಾಡ್‌ಸ್ಟನ್‌ನ ಜೀವನ ಚರಿತ್ರೆ ಓದಲು ತಿಳಿಸಿದಾಗ ಇವರಲ್ಲಿದ್ದ ಜ್ಞಾನದ ಕಿಡಿ ಹೊತ್ತಿಸಿದಂತಾಯಿತು.
ಸಾಮಾಜಿಕ, ರಾಜಕೀಯ ವಿಷಯಗಳು, ಜೀವನ ಚರಿತ್ರೆಗಳಾದ ದಿವಾನ್ ರಂಗಾ ಚಾರ್ಲು (೧೯೧೧), ಗೋಪಾಲಕೃಷ್ಣ ಗೋಖಲೆ (೧೯೧೫), ಸರ್‌.ಕೆ. ಶೇಷಾದ್ರಿ ಅಯ್ಯರ್ (೧೯೧೬), ಶಿವಾಭಿನವ ನೃಸಿಂಹಭಾರತೀ ಸ್ವಾಮಿಗಳು (೧೯೧೭), ಟಾಲ್‌ಸ್ಟಾಯ್ (೧೯೧೭) ಮುಂತಾದ ಕೃತಿಗಳನ್ನು ರಚಿಸಿದರು.
ರಾಜಕೀಯ ವಿಶ್ಲೇಷಣೆ, ವರದಿಗಳಿಂದ ಮೈಸೂರು ನ್ಯಾಯವಿಧಾಯಕ ಸಭೆಯ ಸದಸ್ಯರಾಗಿಯೂ (೧೯೨೬-೪೦) ಸೇವೆ ಸಲ್ಲಿಸಿದರು.
ಪ್ರಶಸ್ತಿಗಳು
ಸನ್ಮಾನಗಳನ್ನು ದೂರವಿರಿಸಿದ ಡಿ.ವಿ.ಜಿ.ಯವರನ್ನು ಹುಡುಕಿಕೊಂಡು ಬಂದ ಪ್ರಶಸ್ತಿಗಳೂ ಹಲವಾರು. ಮೈಸೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ (೧೯೬೧), ‘ಶ್ರೀಮದ್ಭಗವದ್ಗೀತಾ ತಾತ್ಪರ್ಯ’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ (೧೯೬೭), ನಾಗರಿಕದಿಂದ ಸನ್ಮಾನ ಹಾಗೂ ನಿಧಿಸಮರ್ಪಣೆ (೧೯೭೦).